ಬಾಯ್ಸ್, ಚಾಲ್ರ್ಸ್ ವೆರ್ನಾನ್
1855-1944. ಆಂಗ್ಲ ಉಪಜ್ಞೆಕಾರ ಮತ್ತು ವಿಜ್ಞಾನಿ. ಇಂಗ್ಲೆಂಡಿನ ರಟ್ಲ್‍ಲೆಂಡಿನಲ್ಲಿ ಜನನ. ಭೌತಿಕ ಉಪಕರಣಗಳನ್ನು ತಯಾರಿಸುವುದರಲ್ಲಿ ಬಾಯ್ಸ್ ವಿಶೇಷ ನೈಪುಣ್ಯ ಸಾಧಿಸಿದ. ಅಧಿಕ ತ್ರಾಣ ಮತ್ತು ಕ್ರಮಬದ್ಧ ಪುಟಿತತಾ ಗುಣವುಳ್ಳ ಸಪುರ ಕ್ವಾಟ್ರ್ಸ್ ಎಳೆಗಳನ್ನು ಉಪಯೋಗಿಸಿ ಬಾಯ್ಸ್ ತಿರುಚು ತ್ರಾಸು (ಟಾರ್ಷನ್ ಬ್ಯಾಲೆನ್ಸ್) ತಯಾರಿಸಿದ (1895). ಇದರ ಗಾತ್ರ ಸಣ್ಣದು. ಆದರೆ ಸಂವೇದನ ಶೀಲತೆ (ಸೆನ್ಸಿಟಿನೆಸ್) ಹೆಚ್ಚು. ಚಿನ್ನ ಮತ್ತು ಸೀಸದ ಗೋಲಗಳೊಳಗಿನ ಅನ್ಯೋನ್ಯ ಆಕರ್ಷಣ ಬಲವನ್ನು ಈ ತ್ರಾಸಿನಿಂದ ಅಳೆದು ಗುರುತ್ಪಸ್ಥಿರಾಂಕವನ್ನೂ ಭೂಮಿಯ ಸರಾಸರಿ ಸಾಂದ್ರತೆಯನ್ನೂ ನಿಖರವಾಗಿ ನಿರ್ಧರಿಸಲಾಯಿತು. ರೇಡಿಯೋ ಮೈಕ್ರೋಮೀಟರ್. ಕ್ಯಾಲರಿ ಮೀಟರ್, ಚಲಿಸುವಯವವಿರುವ ಕೆಮರ ಇವು ಬಾಯ್ಸನ ಇವರ ಕೆಲವು ಉಪಜ್ಞೆಗಳು.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ